Here are the best Kannada motivation ಕನ್ನಡ ನುಡಿಮುತ್ತುಗಳು below
ಸತ್ಯದ ದಾರಿಯಲ್ಲಿ ನಡೆಯುವ ಜನರಿಗೆ ಅಡ್ಡಿ ಆತಂಕಗಳು, ಸಮಸ್ಯೆಗಳು, ಅವಶ್ಯವಾಗಿ ಎದುರಾಗುತ್ತವೆ. ಆದರೆ, ನಂಬಿರುವ ದೇವರು ಅವರ ಜೀವನದ ದೋಣಿಯನ್ನು ಎಂದು ಮುಳುಗಳು ಬಿಡುವುದಿಲ್ಲ.
ಪದೇ ಪದೇ ನಿನಗೆ ಕಷ್ಟಗಳು ಬರುತ್ತಿವೆ ಎಂದರೆ, ನಿನ್ನ ಹಣೆಯ ಬರಹ ಸರಿಯಿಲ್ಲ ಅಂತಲ್ಲ. ಮುಂದೆ ನಿನಗೋಸ್ಕರ ತುಂಬಾ ಒಳ್ಳೆಯ ದಿನಗಳು ಕಾಯುತ್ತಿವೆ ಎಂದರ್ಥ.
ನಿಧಾನವಾಗಿ ಬೆಳೆಯುವವರನ್ನು ನೋಡಿ ನಗಬೇಡಿ. ಏಕೆಂದರೆ, ಓಡುವ ಮೊಲಕ್ಕಿಂತ ನಡೆದಾಡುವ ಆಮೆಗೆ ಆಯಸ್ಸು ಜಾಸ್ತಿ.
ನಮ್ಮನ್ನು ಯಾರೂ ಗೌರವಿಸುತ್ತಿಲ್ಲ ಅಂತ ಬೇಜಾರಾಗಬೇಡಿ. ಏಕೆಂದರೆ, ಬಟ್ಟೆಯ ಅಂಗಡಿಯಲ್ಲಿ ಒಬ್ಬರಿಗೆ ಇಷ್ಟವಾಗದೆ ಬಿಟ್ಟು ಹೋದ ಬಟ್ಟೆಗಳು ಮತ್ತೊಬ್ಬರಿಗೆ ತುಂಬಾ ಇಷ್ಟವಾಗುತ್ತವೆ. ಜೀವನ ಕೂಡ ಅಷ್ಟೇ.
ನೀನು ಹತ್ತಿರ ಏನು ಇದ್ಯೋ ಅದನ್ನು ದೇವರು ಕೊಟ್ಟಿದ್ದಾನೆ ಎಂದು ಸಂತೋಷದಿಂದ ಇರು. ನಿನ್ನ ಹತ್ತಿರ ಏನು ಇಲ್ವೋ ಅದನ್ನು ದೇವರು ಕೊಡುತ್ತಾನೆ ಎಂದು ನಂಬಿಕೆಯಿಂದ ಇರು.
ಮನೆಯಿಂದ ಹೊರಗೆ ಹೋಗುವಾಗ “ಬುದ್ದಿ” ಜೊತೆಯಲ್ಲಿರಬೇಕು. ಯಾಕೆಂದರೆ, ಈ ಪ್ರಪಂಚವೇ ಒಂದು ಸಂತೆ. ಆದರೆ, ಮನೆಯ ಒಳಗೆ ಬರುವಾಗ “ಹೃದಯ” ಜೊತೆಯಲ್ಲಿರಬೇಕು. ಯಾಕೆಂದರೆ, ಅಲ್ಲಿರುವುದು ಒಂದು ಸುಂದರವಾದ “ಕುಟುಂಬ”
ಮನುಷ್ಯ ತನ್ನ ಬದುಕಿನ ಜೊತೆ ಏಕಾಂಗಿಯಾಗಿ ಹೋರಾಡುವುದನ್ನು ಕಲಿಯಬೇಕು. ಇಲ್ಲವಾದರೆ, ಅವನ ಮನಸ್ಸೇ ಅವನ ಪತನಕ್ಕೆ ಕಾರಣವಾಗುತ್ತದೆ.
ಬರೀ ಹಣ ಸಂಪಾದನೆ ಮಾಡುವುದಕ್ಕೆ ಮಾತ್ರವೇ ಜೀವಿಸಬೇಡ. ನೀನು ಸತ್ತಾಗ ನಿನ್ನನ್ನು ಕರೆದುಕೊಂಡು ಹೋಗೋ ಯಮ ನೀನು ಕೊಡೋ ಲಂಚವನ್ನು ಸ್ವೀಕರಿಸುವುದಿಲ್ಲ. ನೀನು ಮಾಡಿರುವ ಪಾಪ – ಪುಣ್ಯವನ್ನು ಮಾತ್ರ ನೋಡುತ್ತಾನೆ.
ಯಾರೋ ಏನೋ ಅಂದುಕೊಳ್ಳುತ್ತಾರೆ ಅಂತ ಹೆದರಿ ನೀ ಬದುಕಬೇಡ. ಆಡಿಕೊಳ್ಳುವವರು ಯಾರೇ ಬಂದು ನಮ್ಮ ಜೀವನವನ್ನು ನಡೆಸುವುದಿಲ್ಲ, ನಮ್ಮ ಜೀವನವನ್ನು ನಾವೇ ನಡೆಸಬೇಕು.
ಗಿಡ ಯಾವತ್ತೂ ಉದುರಿ ಹೋದ ಎಲೆ, ಹೂವುಗಳ ಬಗ್ಗೆ ಯೋಚಿಸುವುದಿಲ್ಲ. ಹೊಸ ಹೂವಿನ ಸೃಷ್ಟಿಯೇ ಅದರ ಧ್ಯಾನ. ಕಳೆದು ಹೋದುದಕ್ಕೆ ಚಿಂತೆ ಬೇಡ. ಹೊಸತನ್ನು ಸೃಷ್ಟಿಸುವ ಉತ್ಸಾಹವಿರಲಿ.
I hope you enjoyed reading above motivation ಕನ್ನಡ ನುಡಿಮುತ್ತುಗಳು quotes. Read more for more quotes here.